PM awas yojana application | ಪಿಎಂ ಆವಾಸ್ ಯೋಜನೆ ಅರ್ಜಿ ಆರಂಭ. ಇಲ್ಲಿದೆ ಅರ್ಜಿ ಹಾಕುವ ಮಾಹಿತಿ!
PM awas yojana application : ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕುವ ಬಗ್ಗೆ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ. ಈ ಯೋಜನೆಗೆ ಹೇಗೆ ಅರ್ಜಿ ಹಾಕುವುದು? ಯಾರೆಲ್ಲ ಈ ಯೋಜನೆಗೆ ಅರ್ಜಿ ಹಾಕಬಹುದು? ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು? ಈ ಯೋಜನೆಯಿಂದ ಉಚಿತ ಮನೆಯನ್ನು ಹೇಗೆ ಪಡೆಯಬಹುದು ಅನ್ನುವ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಸ್ನೇಹಿತರೆ ಈ ಯೋಜನೆಗೆ ಅರ್ಜಿ ಹಾಕುವ ದಿನಾಂಕವನ್ನು ವಿಸ್ತರಿಸಲಾಗಿದ್ದು, 30 ಏಪ್ರಿಲ್ 2025 ಅಂದರೆ ಈ ತಿಂಗಳು 30 ನೆಯ ತಾರೀಖಿನ ತನಕ ಅವಕಾಶ ನೀಡಲಾಗಿದೆ ಆಸಕ್ತಿ ಇದ್ದವರು ಅರ್ಜಿ ಹಾಕಬಹುದು. ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಮತ್ತು ಅತಿ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಮೂಲಕ ಪಿಎಂ ಆವಾಸ್ ಯೋಜನೆಯ ಅಡಿಯಲ್ಲಿ ಮನೆಗಳ ನಿರ್ಮಾಣ ಮಾಡಲು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಈ ಯೋಜನೆಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಾತ್ರ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಬಗ್ಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ!
ಈ ಮಾಹಿತಿ ಮಿತ್ರ ಮಾಧ್ಯಮದ ಮೂಲಕ ಜನರಿಗೆ ಪ್ರತಿದಿನ ಇದೇ ರೀತಿಯ ಸರ್ಕಾರದ ಯೋಜನೆಗಳ ಲಾಭ ಹೇಗೆ ಪಡೆಯಬೇಕು, ಅವುಗಳಿಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿಯನ್ನು ನೀಡುತ್ತದೆ. ಆದ್ದರಿಂದ ತಪ್ಪದೆ ಎಲ್ಲರೂ ಫಾಲೋ ಮಾಡಿಕೊಳ್ಳಿ. ಇದರ ಜೊತೆಗೆ ಹೊಸ ಹುದ್ದೆಗಳು ವಿದ್ಯಾರ್ಥಿಗಳ ಸ್ಕಾಲರ್ಶಿಪ್, ರೇಷನ್ ಕಾರ್ಡ್ ಅರ್ಜಿ, ಗ್ಯಾರೆಂಟಿ ಯೋಜನೆಗಳ ಅಪ್ಡೇಟ್ ಮತ್ತು ರೈತರ ಸಬ್ಸಿಡಿ ಯೋಜನೆಗಳು ಸಾಲ ಮನ್ನಾ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಮಾಹಿತಿ ಮಿತ್ರ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳು ಸೇರಿಕೊಳ್ಳಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ :
ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 25 ಜೂನ್ 2015 ರಂದು ಜಾರಿಗೆ ತರಲಾಗಿದೆ ಈ ಯೋಜನೆಯ ಮೂಲ ಉದ್ದೇಶ ಬಡ ಕುಟುಂಬಗಳಿಗೆ ಆಶ್ರಯವನ್ನು ನಿರ್ಮಿಸಲು ಆರ್ಥಿಕ ಸಹಾಯವನ್ನು ನೀಡುವುದು. ಈ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY -G) ಎಂದು ಮತ್ತು ಅರ್ಬನ್ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್ (PMAY-U) ಎಂದು ನಡೆಸಲಾಗುತ್ತದೆ.
ಸರ್ಕಾರವೂ ನೀಡಿರುವ ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಸುಮಾರು 4.1 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಯೋಜನೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು, ಕೆಳಗೆ ನೀಡಿದ ಅರ್ಹತೆ ಉಳ್ಳ ಕುಟುಂಬದವರು ಈ ಪಿಎಂ ಆವಾಸ್ ಯೋಜನೆಗೆ ಅರ್ಜಿ (PM awas yojana application) ಹಾಕಬಹುದು.
ಪಿಎಂ ಆವಾಸ್ ಯೋಜನೆಗೆ ಯಾರು ಅರ್ಜಿ ಹಾಕಬಹುದು?
ಈ ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕಲು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಾಗಿದ್ದು, ಈ ಕೆಳಗೆ ನೀಡಿದ ಅರ್ಹತೆಗಳನ್ನು ಹೊಂದಿರಬೇಕು.
- ಅರ್ಜಿ ಹಾಕಲು ನಿಮ್ಮ ಕುಟುಂಬವು BPL ರೇಷನ್ ಕಾರ್ಡ್ ಹೊಂದಿರಬೇಕು.
- ಅರ್ಜಿ ಹಾಕಲು ಭಾರತದವರು ಆಗಿರಬೇಕು.
- ಸ್ವಂತ ಮನೆಯನ್ನು ಹೊಂದಿರಬಾರದು.
- ಅರ್ಜಿ ಹಾಕಲು ಕುಟುಂಬದ ಆರ್ಥಿಕ ವೇತನ 3 ಲಕ್ಷದಿಂದ 6 ಲಕ್ಷದ ಒಳಗೆ ಇರಬೇಕು.
ಆವಾಸ್ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :
ಈ ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕಲು ಕೆಳಗೆ ನೀಡಿದ ದಾಖಲೆಗಳನ್ನು ನೀವು ಹೊಂದಿರಬೇಕು.
- ಚಾಲ್ತಿಯಲ್ಲಿರುವ ಫೋನ್ ನಂಬರ್
- ಪಾಸ್ಪೋರ್ಟ್ ಅಳತೆ ಫೋಟೋ
- ಆಧಾರ್ ಕಾರ್ಡ್
- ಜಾಬ್ ಕಾರ್ಡ್
- ಬ್ಯಾಂಕ್ ಖಾತೆಯ ನಂಬರ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಪಿಎಂ ಆವಾಸ್ ಯೋಜನೆಗೆ ಆನ್ಲೈನ್ ಅಲ್ಲಿ ಹೇಗೆ ಅರ್ಜಿ ಹಾಕುವುದು?
ಪಿಎಂ ಆವಾಸ್ ಯೋಜನೆ ಅರ್ಜಿ ಹಾಕಲು ಕೆಳಗೆ ನೀಡಿದ ಹಂತಗಳನ್ನು ಪಾಲಿಸಿ.
ಮೊದಲು ಕೆಳಗೆ ನೀಡಿದ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ನೋಂದಣಿ ಮೇಲೆ ಒತ್ತಿ ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳ ಮಾಹಿತಿಯನ್ನು ಭರ್ತಿ ಮಾಡಿ.
ಇದಾದಮೇಲೆ ಅಲ್ಲಿ ಕೇಳಲಾದ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಕೊನೆಗೆ ಅರ್ಜಿಯನ್ನು ಸಲ್ಲಿಸಿ (submit) .
ಪಿಎಂ ಆವಾಸ್ ಯೋಜನೆಗೆ ಆನ್ಲೈನ್ ಅಲ್ಲಿ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ –
ಸ್ನೇಹಿತರೆ, ನಿಮಗೆ ಆನ್ಲೈನ್ ಅಲ್ಲಿ ಮೊಬೈಲ್ ಮೂಲಕ ಅರ್ಜಿ ಹಾಕಲು ಬರಲ್ಲ ಅಂದರೆ, ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ, ಮೇಲೆ ಹೇಳಿದ ಹಾಗೆ ಎಪ್ರಿಲ್ 30 ರ ಒಳಗೆ ಅರ್ಜಿಯನ್ನು ಹಾಕಿರಿ.
ಈ ಮಾಹಿತಿ ನಿಮಗೆ ಇಸ್ಟ ಆಗಿದೆ ಮತ್ತು ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಪ್ರತಿ ದಿನ ಭೇಟಿ ನೀಡಿ.
ಈ ಮಾಹಿತಿ ಮಿತ್ರ ಮಾಧ್ಯಮದ ಮೂಲಕ ಜನರಿಗೆ ಪ್ರತಿದಿನ ಇದೇ ರೀತಿಯ ಸರ್ಕಾರದ ಯೋಜನೆಗಳ ಲಾಭ ಹೇಗೆ ಪಡೆಯಬೇಕು, ಅವುಗಳಿಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿಯನ್ನು ನೀಡುತ್ತದೆ. ಆದ್ದರಿಂದ ತಪ್ಪದೆ ಎಲ್ಲರೂ ಫಾಲೋ ಮಾಡಿಕೊಳ್ಳಿ. ಇದರ ಜೊತೆಗೆ ಹೊಸ ಹುದ್ದೆಗಳು ವಿದ್ಯಾರ್ಥಿಗಳ ಸ್ಕಾಲರ್ಶಿಪ್, ರೇಷನ್ ಕಾರ್ಡ್ ಅರ್ಜಿ, ಗ್ಯಾರೆಂಟಿ ಯೋಜನೆಗಳ ಅಪ್ಡೇಟ್ ಮತ್ತು ರೈತರ ಸಬ್ಸಿಡಿ ಯೋಜನೆಗಳು ಸಾಲ ಮನ್ನಾ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಮಾಹಿತಿ ಮಿತ್ರ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳು ಸೇರಿಕೊಳ್ಳಿ