Karnataka rain forecast : ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ, ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
Karnataka rain Forecast: ಭಾರತದಲ್ಲಿ ಹವಾಮಾನ ಚಿತ್ರಣ ಬದಲಾಗಿದೆ. ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ಇದ್ದರೆ, ಮತ್ತೆ ಕೆಲವೆಡೆ ಶಾಖದ ಅಲೆ ಎಚ್ಚರಿಕೆ ನೀಡಲಾಗಿದೆ. ಇದಲ್ಲದೇ ಸಮುದ್ರ ಹಾಗೂ ಭೂಮಿ ಮಲ್ಮೈನ ಗಾಳಿ ಬೀಸುವಿಕೆ, ವೈಪರೀತ್ಯಗಳು ಮುಂದುವರಿದಿವೆ. ಹೀಗಾಗಿ ಬೇಸಿಗೆ ವೇಳೆಯು ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದಲ್ಲಿ ಮುಂದಿನ 5 ದಿನಗಳವರೆಗೆ ದೇಶದ 22 ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಗುಡುಗು ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಆಗಲಿದೆ. ಕೆಲವು ರಾಜ್ಯಗಳ ಅಲ್ಲಲ್ಲಿ ಆಲಿಕಲ್ಲು ಸಹಿತ ಮಳೆ ಆರ್ಭಟಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ, ಹಲವು ಪ್ರದೇಶಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ವೈಪರೀತ್ಯದ ಪ್ರಭಾವ ಹೆಚ್ಚಾದರೆ, ಗಾಳಿಯ ವೇಗ ಮತ್ತಷ್ಟು ಹೆಚ್ಚಾಗಬಹುದು. ದೇಶದ ವಾಯುವ್ಯ ರಾಜ್ಯಗಳು ಹಾಗೂ ಮಧ್ಯ ಭಾರತ ಕೆಲ ರಾಜ್ಯಗಳಲ್ಲಿ ತೀವ್ರ ಶಾಖ ಶಾಖದ ಅಲೆ ಸಾಮಾನ್ಯವಾಗಿದೆ.
SBI ಬ್ಯಾಂಕ್ ಮೂಲಕ 3 ಲಕ್ಷ ತನಕ ಸಾಲ ಆನ್ಲೈನ್ ಸಾಲ ಪಡೆಯಿರಿ.
ಹವಾಮಾನ ವೈಪರೀತ್ಯದ ಅಪ್ಡೇಟ್
ಐಎಂಡಿ ಮುನ್ಸೂಚನೆ ಪ್ರಕಾರ, ಹೊಸ ವಾಯುಭಾರ ಕುಸಿತವು ಸಕ್ರಿಯವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಭಾರೀ ಮಳೆ (Karnataka rain forecast) ಮತ್ತು ಹಿಮಪಾತಕ್ಕೆ ಕಾರಣವಾಗಲಿದೆ. ಮುಂದಿನ ಐದು ದಿನಗಳ ವರೆಗೆ ಬಾಂಗ್ಲಾದೇಶದ ಉತ್ತರ ಭಾಗ, ಅಸ್ಸಾಂನ ಈಶಾನ್ಯ ಭಾಗದಲ್ಲಿ ವಾಯುಭಾರ ಹೆಚ್ಚಿನ ಪ್ರಭಾವ ಬೀರಲಿದೆ. ಮೇಘಾಲಯ ಮತ್ತು ಪಕ್ಕದ ರಾಜ್ಯಗಳಲ್ಲಿ ಭಾರೀ ಮುಂದಿನ ಕೆಲವು ದಿನಗಳಲ್ಲಿ ವ್ಯಾಪಕ ಮಳೆ ದಾಖಲಾಗಲಿದೆ. ಮಧ್ಯ ಛತ್ತೀಸ್‌ಗಢದಿಂದ ಮನ್ನಾರ್ ಕೊಲ್ಲಿಯವರೆಗೆ ವಿಸ್ತರಣೆ ಆಗಿರುವ ವೈಪರೀತ್ಯದ ಗಾಳಿಯಿಂದಾಗಿ ಒಂದೇಡೆ ಮಳೆ ಸುರಿಸುವ ಮೋಡಗಳು (Karnataka rain forecast) ಜಮಾಯಿಸಲಿದ್ದು, ಇದರಿಂದ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಭಾರೀ ಮಳೆ ನೋಡುವ ರಾಜ್ಯಗಳು ಯಾವುವು?
ದೇಶದ ವಿವಿಧೆಡೆ ಇಂದಿನಿಂದ (ಏಪ್ರಿಲ್ 27) ಮುಂದಿನ 5 ದಿನ ಭಾರೀ ಮಳೆ ಆಗಲಿದೆ. ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ ಹಾಗೂ ಮಿಜೋರಾಂನಲ್ಲಿ ಭಾರಿ ಮಳೆಯಾಗುವ (Karnataka rain forecast) ಎಚ್ಚರಿಕೆ. ಇಂದು ಮೇಘಾಲಯದಲ್ಲಿ ಹೆಚ್ಚಿನ ಮಳೆ ಆಗುವ ಸಂಭವವಿದೆ. ನಂತರ ಪೂರ್ವ ಭಾರತದ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ವಿವಿಧೆಡೆ ಏಪ್ರಿಲ್ 28ರವರೆಗೆ ಆಲಿಕಲ್ಲು ಮಳೆ ಸಹಿತ ವ್ಯಾಪಕ ಮಳೆ ಆಗಲಿದೆ.
ಏಪ್ರಿಲ್ 28ರವರೆಗೆ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ವಿದರ್ಭ ಪ್ರದೇಶ ಸೇರಿದಂತೆ ಮಧ್ಯಭಾಗದ ವಿವಿಧೆಡೆ ಬಿರುಗಾಳಿ ಮಳೆ ಸಾಧ್ಯತೆ ಇದೆ. ಏಪ್ರಿಲ್ 29 ರವರೆಗೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಅತ್ಯಧಿಕ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.