Free gas cylinder : ಮಹಿಳೆಯರಿಗೆ ಸರ್ಕಾರದಿಂದ ಉಚಿತ ಗ್ಯಾಸ್ ಸಿಲಿಂಡರ್ | ಹೇಗೆ ಅರ್ಜಿ ಸಲ್ಲಿಸುವುದು ಇಲ್ಲಿದೆ!
Free gas cylinder : ನಮಸ್ಕಾರ ಸ್ನೇಹಿತರೆ, ಇವತ್ತಿನ ಹೊಸ ಮಾಹಿತಿಗೆ ತಮಗೆಲ್ಲ ಸ್ವಾಗತ. ಸ್ನೇಹಿತರೆ ಕೇಂದ್ರ ಸರ್ಕಾರವು ಇತ್ತೀಚಿನ ಮಹಿಳೆಯರಿಗೆ ಹಲವು ಸೌಲತ್ತು ಮತ್ತು ಸೌಲಭ್ಯಗಳನ್ನು ನೀಡುತ್ತಿದೆ. ಅದರಂತೆ ಇದೀಗ ಬಡ ಕುಟುಂಬದ ಮಹಿಳೆಯರಿಗೆ ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಅದಕ್ಕಾಗಿ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇರುವ ಕುಟುಂಬದವರು ಅರ್ಜಿ ಹಾಕಬಹುದು. ಅರ್ಜಿ ಹಾಕಲು ಸಂಭಂದಪಟ್ಟ ಮಾಹಿತಿ ಇಲ್ಲಿದೆ.
ನಮ್ಮ ದೇಶದಲ್ಲಿನ ಜನರು ಮಾಡರ್ನ್ ಯುಗಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಈ ಬದಲಾವಣೆಯಲ್ಲಿ ಜನರ ಜೀವನ ಶೈಲಿ ಕೂಡ ಬದಲಾಗುತ್ತಿದೆ. ಇದರಲ್ಲಿ ಅಡುಗೆ ಮಾಡಲು ಅಥವಾ ಇನ್ನಿತರ ಕೆಲಸಗಳಿಗೆ ಹಿಂದೆ ಬಳಸುತ್ತಿದೆ ಸೌದೆಯ ಒಲೆಗಳು ಕೂಡ ಬದಲಾಗಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿನ ಪ್ರತಿಯೊಂದು ಕುಟುಂಬವೂ ಕೂಡ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದೆ.ಆದ್ದರಿಂದ ಗ್ಯಾಸ್ ಸಿಲಿಂಡರ್ ಬೆಲೆ ತುಂಬಾ ಜಾಸ್ತಿಯಾಗಿದೆ. ಆದರೆ ಕೆಲವು ಬಡ, ಕೆಳವರ್ಗದ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರವು ಈ ರೀತಿಯ ಬಡ, ಕೆಳವರ್ಗದ ಕುಟುಂಬಗಳಿಗೆ ಸಹಕರಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ಈ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತಿ ಇರುವವರು ಮಹಿಳೆಯರು ಅರ್ಜಿ ಹಾಕಬಹುದು. ಅರ್ಜಿ ಹಾಕುವ ಅರ್ಹತೆಗಳು, ದಾಖಲೆಗಳು ಮತ್ತು ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಪ್ರಧಾನಮಂತ್ರಿ ಉಜ್ವಲ್ ಯೋಜನೆ (Free gas cylinder) :
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು ಕೇಂದ್ರ ಸರ್ಕಾರವು ದೇಶದಲ್ಲಿನ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿಗೆ ಹಣದ ಸಹಕಾರ ನೀಡಬೇಕು ಅನ್ನುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯು ಬಡ ಕುಟುಂಬದ ಮಹಿಳೆಯರ ಸಬಲೀಕರಣ ಮತ್ತು ಮಕ್ಕಳ ಆರೋಗ್ಯದ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಶುದ್ಧ ಗ್ಯಾಸ್ ಸಿಲಿಂಡರ್ ಬಳಸಲು ಪ್ರೇರೇಪಣೆ ನೀಡುತ್ತಿದೆ. ಈ ಯೋಜನೆಯ ಮೂಲಕ ಹೊಸದಾಗಿ ಮದುವೆಯಾದವರು ಕೂಡ ಲಾಭ ಪಡೆಯಬಹುದಾಗಿದೆ.ನಿಮ್ಮ ಕುಟುಂಬದಲ್ಲಿನ ಯಾವುದೇ ಮಹಿಳೆಯ ಹೆಸರಿನಲ್ಲಿ ಅರ್ಜಿ ಹಾಕಿ ಉಚಿತ ಗ್ಯಾಸ್ ಸಿಲಿಂಡರ್ (Free gas cylinder) ಪಡೆಯಬಹುದಾಗಿದೆ.
ಗೃಹ ಲಕ್ಷ್ಮಿ 3 ತಿಂಗಳ ಹಣ ಒಟ್ಟಿಗೆ ಜಮಾ, ಇಲ್ಲಿ ತಿಳಿಯಿರಿ!
ಪಿಎಂ ಉಜ್ವಲ್ ಯೋಜನೆ ಅರ್ಹತೆಗಳು :
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರ್ಜಿ ಹಾಕಲು ಬಯಸುವ ಮಹಿಳೆಯರು ಈ ಅರ್ಹತೆಗಳನ್ನು ಹೊಂದಿರಬೇಕು.
- ಅರ್ಜಿ ಹಾಕುವ ಮಹಿಳೆಯರು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.
- ಮಹಿಳೆಯ ಕುಟುಂಬದಲ್ಲಿ ಈ ಹಿಂದೆ ಈ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಪಡೆದಿರಬರದು.
- ಬಡ ಕುಟುಂಬದ, SC/ST ವರ್ಗಕ್ಕೆ ಸೇರಿದ, ಅರಣ್ಯವಾಸಿ ವರ್ಗದ, ನದಿ & ದ್ವೀಪಗಳಲ್ಲಿ ವಾಸಿಸುವ ವರ್ಗದ ಮಹಿಳೆಯರು ಅರ್ಜಿ ಹಾಕಬಹುದು.
ಉಚಿತ ಗ್ಯಾಸ್ ಸಿಲಿಂಡರ್ ಗೆ ಹೇಗೆ ಅರ್ಜಿ ಹಾಕುವುದು?
ಪಿಎಂ ಉಜ್ವಲ್ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಹಾಕಬಹುದು. ಅರ್ಜಿ ಹಾಕಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಆಫ್ಲೈನ್ ಅರ್ಜಿ ಹಾಕಲು :
ಸ್ನೇಹಿತರೆ ಆಫ್ಲೈನ್ ಅಲ್ಲಿ ಅರ್ಜಿ ಹಾಕಲು ಕೆಳಗೆ ನೀಡಿದ pmuy.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ನಂತರ ಅಲ್ಲಿ ಅರ್ಜಿ ಹಾಕಲು ಬೇಕಾಗುವ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ಇದಾದಮೇಲೆ ಅದರಲ್ಲಿ ಕೇಳಲಾದ ಪ್ರತಿಯೊಂದು ವಿವರಗಳನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳ ಜೆರಾಕ್ಸ ಅನ್ನು ಅಂಟಿಸಿ. ನಂತರ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ (ಗ್ಯಾಸ್ ವಿತರಕರು) ಗೆ ಸಲ್ಲಿಸಿ. ಅವರು ನಿಮ್ಮ ದಾಖಲೆಗಳನ್ನೂ ಪರಿಶೀಲಿಸಿ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಾರೆ.
ಆನ್ಲೈನ್ ಅರ್ಜಿ ಹಾಕಲು ಇಲ್ಲಿ ಒತ್ತಿ.
ಆನ್ಲೈನ್ ಅರ್ಜಿ ಹಾಕಲು :
ಆನ್ಲೈನ್ ಅಲ್ಲಿ ಅರ್ಜಿ ಹಾಕಲು ಮೇಲೆ ನೀಡಿದ ವೆಬ್ ಸೈಟ್ ಮೇಲೆ ಒತ್ತಿ, ನೊಂದಣಿ ಮಾಡಿಕೊಂಡು ಕೇಳಲಾದ ದಾಖಲೆಗಳ ವಿವರ ಭರ್ತಿ ಮಾಡಿ ಮತ್ತು ಅವುಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ. ನಂತರ ನಿಮಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ.