Anganvadi jobs Karnataka 2025 | ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಹಾಕುವುದು ಹೇಗೆ ? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ?
Anganvadi jobs Karnataka 2025 : ನಮಸ್ಕಾರ ಪ್ರೀತಿಯ ಓದುಗರೇ, ಇವತ್ತಿನ ಈ ಒಂದು ಲೇಖನದ ಮೂಲಕ ನಾವು ನಿಮಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕರೆಯಲಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ(Anganvadi jobs Karnataka 2025) ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ . ಈ ಹುದ್ದೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಕುರಿತು ಈ ಕೆಳಗೆ ತಿಳಿಸುತ್ತಿದ್ದೇವೆ.ಆದ್ದರಿಂದ ಆಸಕ್ತಿ ಇರುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ಈ ಮೇಲೆ ತಿಳಿಸಿದಂತೆ ನಮ್ಮ ರಾಜ್ಯದಲ್ಲಿ ಹಲವು ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ(Anganvadi jobs Karnataka 2025) ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಒಟ್ಟು 558 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೆನು, ಇದಕ್ಕೆ ಸಂಬಂಧ ಪಟ್ಟ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ.
ಕರ್ನಾಟಕದ ಹಲವು ಗ್ರಾಮಗಳಲ್ಲಿರುವ ಅಂಗನವಾಡಿಗಳಲ್ಲಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇರುವ ಕಾರಣ ಗ್ರಾಮಗಳಲ್ಲಿನ 6 ವರ್ಷದ ಕೆಳಗಿನ ಮಕ್ಕಳ ದೈಹಿಕ ಮತ್ತು ಶೈಕ್ಷಣಿಕ ಉನ್ನತಿಯಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಕಷ್ಟವಾಗುತ್ತಿದೆ.ಆದ ಕಾರಣ ಈ ಯಶಸ್ಸನ್ನು ಕಾಣುವ ನಿಟ್ಟಿನಲ್ಲಿ ಈಗ 558 ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ . ಈ ಹುದ್ದೆಗಳಿಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ವರದಿಯ ಮೂಲಕ ತಿಳಿದುಕೊಳ್ಳಿ.
ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳು(Anganvadi jobs Karnataka 2025) ಅರ್ಜಿಯನ್ನು ಯಾರೆಲ್ಲ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಆರ್ಹತೆಗಳೆನು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ?ಮತ್ತು ಈ ಅಂಗನವಾಡಿ ಹುದ್ದೆಗೆ ಅರ್ಜಿ ಹಾಕುವುದು ಹೇಗೆ? ಎಂಬ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕೆಳಗೆ ನೀಡಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ವಿವರ :
ನಮ್ಮ ರಾಜ್ಯದಲ್ಲಿ ಹಲವು ಅಂಗನವಾಡಿಗಳಿಗೆ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಅವಶ್ಯಕತೆ ಇರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಒಟ್ಟು 558 ಅಂಗನವಾಡಿ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
CBSE SSLC ಫಲಿತಾಂಶ ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿ ಒತ್ತಿ.
ಗಮನಿಸಿ : ಈ ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಆಯಾ ಗ್ರಾಮದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಅಂಗನವಾಡಿ ಹುದ್ದೆಗೆ ವಯೋಮಿತಿ ಎಸ್ಟು?
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯ ವಯಸ್ಸು ಕನಿಷ್ಟ 19 ಮತ್ತು ಗರಿಷ್ಠ ವಯಸ್ಸು 35 ಆಗಿರುತ್ತದೆ.
•ಸಡಿಲಿಕೆ : ವಿಕಲ ಚೇತನ ಮಹಿಳೆಯರಿಗೆ 10 ವರ್ಷಗಳ ಕಾಲ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆಗಳೇನು?
ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಹಿಳೆಯರು ಆಯಾ ಹುದ್ದೆಗಳಿಗೆ ಸಂಬಂದಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು . ಅರ್ಹತೆಯನ್ನು ಕೆಳಗೆ ನೀಡಲಾಗಿದೆ.
1.ಕಾರ್ಯಕರ್ತೆ ಹುದ್ದೆಯ ವಿದ್ಯಾರ್ಹತೆ :
•ಈ ಹುದ್ದೆಗೆ ಅರ್ಜಿ ಹಾಕಲು ಮಹಿಳೆಯು ಕನಿಷ್ಟ ಪಿಯುಸಿ(PUC) ಪಾಸಾಗಿರಬೇಕು.
•SSLC ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿರಬೇಕು.
•ಒಂದು ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಭೇತಿ ಪಡೆದವರಿಗೆ ಮತ್ತು ಸದರಿ ಕೋರ್ಸ್ ಪಡೆದವರಿಗೆ ಬೋನಸ್ +5 ಅಂಕಗಳು ನೀಡಲಾಗುವುದು.
2.ಅಂಗನವಾಡಿ ಸಹಾಯಕಿ ಹುದ್ದೆಗೆ ವಿದ್ಯಾರ್ಹತೆ :
•ಕರ್ನಾಟಕ ರಾಜ್ಯ ನಡೆಸುವ ಪ್ರೌಢ ಶಿಕ್ಷಣ ಪರೀಕ್ಷೆಯಲ್ಲಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆ ಇಂದ SSLC ಪಾಸಾಗಿರಬೇಕು ಮತ್ತು ಪ್ರಥಮ ಭಾಷೆಯಾಗಿ ಕನ್ನಡವನ್ನು ತೆಗೆದುಕೊಂಡಿರಬೇಕು.
•SSLC ಯಲ್ಲಿ ಗರಿಷ್ಠ 625 ಅಂಕಗಳಿಗೆ ಕನಿಷ್ಟ 219 ಅಂಕಗಳನ್ನು ತೆಗೆದುಕೊಂಡು ಪಾಸಾಗಿರಾಬೇಕು.
•ನೀವೇನಾದರೂ ಬೇರೆ ರಾಜ್ಯದಲ್ಲಿ SSLC ಮುಗಿಸಿದ್ದರೆ, ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಭಾಷಾ ವಿಷಯವಾಗಿ ತೆಗೆದುಕೊಂಡಿರಬೇಕು.
ಆನ್ಲೈನ್ ಅರ್ಜಿ ಹಾಕಲು ಯಾವ ದಾಖಲೆಗಳು ಬೇಕು?
- ಜನನ ಪ್ರಮಾಣ ಪತ್ರ (SSLC ಯಲ್ಲಿ ಇರುವ ಅಂಕಪಟ್ಟಿ)
- ಮೇಲೆ ಹೇಳಿದ ವಿದ್ಯಾರ್ಹತೆಗೆ ಸಂಭಂದ ಪಟ್ಟ ಅಂಕಪಟ್ಟಿಗಳು
- ತಹಶೀಲ್ದಾರರಿಂದ ಪಡೆದ ಮೂರು ವರ್ಷದೊಳಗಿನ ವಾಸಸ್ಥಳ ಪ್ರಮಾಣ ಪತ್ರ
- ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ
- ವಿಧವಾ ಪ್ರಮಾಣ ಪತ್ರ (ಇದ್ದರೆ)
- ಅಂಗವಿಕಲತೆ ಪ್ರಮಾಣ ಪತ್ರ (ಇದ್ದರೆ)
- ವಿಚ್ಛೇದನ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ
- ಆಧಾರ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ರೇಷನ್ ಕಾರ್ಡ್
ಈ ಮೇಲಿನ ಎಲ್ಲಾ ದಾಖಲೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಂದ ಪರಿಶೀಲಿಸಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.
ಅಂಗನವಾಡಿಯ ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.
👉👉👉 ಆರ್ಜಿಗಾಗಿ ಇಲ್ಲಿ ಒತ್ತಿ 👈👈👈
ಅರ್ಜಿ ಹಾಕುವುದು ಹೇಗೆ ?
1. ಈ ಮೇಲೆ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ ಸೈಟ್ ಮೇಲೆ ಒತ್ತಿ.
2. ನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು ಹಾಗೂ ಅಧಿಸೂಚನೆಯ ನಂಬರ್ ಹಾಕಿ ಅರ್ಜಿಯನ್ನು ಮುಂದುವರೆಸಿ.
3. ನಂತರ ಓಪನ್ ಆದ ಫಾರ್ಮ್ ಅನ್ನು ಪೂರ್ತಿಯಾಗಿ ಭರ್ತಿ ಮಾಡಿ.
4. ನಂತರ ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
5. ಕೊನೆಯದಾಗಿ ಇನ್ನೊಮ್ಮೆ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು ಅರ್ಜಿಯನ್ನು submit ಮಾಡಿ.
ಈ ಮೇಲೆ ಹೇಳಲಾದ ಎಲ್ಲಾ ಹಂತಗಳನ್ನು ಅನುಸರಿಸಿ ಅಂಗನವಾಡಿಯ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಸುಲಭವಾಗಿ ಅರ್ಜಿ ಹಾಕಬಹುದು.
ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ?
ಕೆಳಗೆ ನೀಡಿದ ದಿನಾಂಕದ ಒಳಗೆ ಅರ್ಜಿಯನ್ನು ಹಾಕಿ ಅಗತ್ಯ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಅರ್ಜಿ ಆರಂಭದ ದಿನಾಂಕ : 18/04/2025
- ಅರ್ಜಿ ಕೊನೆಯ ದಿನಾಂಕ : 20/05/2025
ನಮ್ಮ ಈ ಜಾಲ ತಾಣವೂ ಜನರಿಗೆ ಪ್ರತಿ ದಿನ ಉಪಯೋಗವಾಗುವ ಸುದ್ದಿಗಳನ್ನು ನೀಡಿ ಜನರಿಗೆ ಸಹಾಯ ಮಾಡುವ ಉದ್ದೇಶವನ್ನೂ ಹೊಂದಿದೆ. ಈ ನಿಟ್ಟಿನಲ್ಲಿ ನಾವು ಪ್ರತಿ ದಿನದ ಸುದ್ದಿಗಳು , ಸರ್ಕಾರದ ಹೊಸ ಯೋಜನೆಗಳು, ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಸ್ಕಾಲರ್ಷಿಪ್ ಮಾಹಿತಿ, ಉದ್ಯೋಗದ ಮಾಹಿತಿಗಳು ಮತ್ತು ರೈತರಿಗೆ ಸಂಬಂಧಪಟ್ಟ ಯೋಜನೆಗಳು ,ಸಬ್ಸಿಡಿಗಳು & ಬೆಳೆ ಪರಿಹಾರ ಇನ್ನು ಹಲವು ಮಾಹಿತಿಯನ್ನು ತಿಳಿಸುತ್ತೇವೆ. ಈ ಎಲ್ಲಾ ಮಾಹಿತಿಗಳಿಗಾಗಿ ನಮ್ಮ ವೆಬ್ ಸೈಟ್ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.
ನಿಮಗೆ ಪ್ರತಿ ದಿನ ಇದೆ ರೀತಿಯ ಮಾಹಿತಿ ಬೇಕಾಗಿದ್ದರೆ ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಭೇಟಿ ನೀಡಿ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.
1 thought on “Anganvadi jobs Karnataka 2025 | ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಹಾಕುವುದು ಹೇಗೆ ? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ?”