PM internship scheme 2025 : ಯುವಕರಿಗೆ ಸರ್ಕಾರದಿಂದ ತಿಂಗಳಿಗೆ ₹5000, ಈ ರೀತಿ ಅರ್ಜಿ ಹಾಕಿರಿ !

PM internship scheme 2025 : ಯುವಕರಿಗೆ ಸರ್ಕಾರದಿಂದ ತಿಂಗಳಿಗೆ ₹5000, ಈ ರೀತಿ ಅರ್ಜಿ ಹಾಕಿರಿ !

 

PM Internship Scheme: ಕೇಂದ್ರ ಸರ್ಕಾರವು ದೇಶದ ಯುವಜನರಿಗೆ ಗುಡ್‌ ನ್ಯೂಸ್‌ ನೀಡಿದೆ. ತಿಂಗಳಿಗೆ ₹5,000 ಸ್ಟೈಪೆಂಡ್‌ ನೀಡುವ ‘ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಎರಡನೇ ಹಂತವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಾರ್ಚ್‌ 31 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಗಡುವನ್ನು ಏಪ್ರಿಲ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ತಮ್ಮ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಸುಧಾರಿಸಲು ಬಯಸುವವರಿಗೆ ಇದು ಉತ್ತಮ ಅವಕಾಶ. ಪೂರ್ಣ ವಿವರ ಇಲ್ಲಿದೆ.

ಯುವಕರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಸೂಕ್ತ ಉದ್ಯೋಗಾವಕಾಶ ಪಡೆಯಲು ಸಹಾಯಕವಾಗುವಂತೆ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ’ಯನ್ನು (Prime Minister Internship Scheme) ಆರಂಭಿಸಿತ್ತು. ಈ ಯೋಜನೆಯ ಎರಡನೇ ಹಂತಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್‌ 31ಕ್ಕೆ ಮುಗಿದಿತ್ತು. ಆದರೆ, ಕೇಂದ್ರ ಸರ್ಕಾರವು ಈಗ ಮತ್ತೊಮ್ಮೆ ಗಡುವನ್ನು ವಿಸ್ತರಿಸುವ ಮೂಲಕ ಗುಡ್‌ ನ್ಯೂಸ್‌ ನೀಡಿದೆ. ಈ ಯೋಜನೆಗೆ 2025ರ ಏಪ್ರಿಲ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಗಡುವಿನೊಳಗೆ ಅರ್ಜಿ ಸಲ್ಲಿಸಿ, ಈ ಯೋಜನೆಗೆ ಸೇರಿದರೆ, ಒಂದು ವರ್ಷದವರೆಗೆ ಪ್ರತಿ ತಿಂಗಳು ₹5,000 ಸ್ಟೈಪೆಂಡ್‌ ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರವು 2024ರ ವಾರ್ಷಿಕ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿತು. ಈಗಾಗಲೇ ಮೊದಲ ಹಂತದಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಇದೀಗ ಎರಡನೇ ಹಂತದ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಯುವಕರು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಗಡುವನ್ನು ವಿಸ್ತರಿಸಲಾಗಿದೆ.

ಆದರೆ, ಹಲವಾರು ಕಂಪನಿಗಳಿಗೆ ಸಂಬಂಧಿಸಿದ ಅವಕಾಶಗಳ ಆಯ್ಕೆ ಪ್ರಕ್ರಿಯೆಯು 2025ರ ಏಪ್ರಿಲ್ 1 ರಿಂದಲೇ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ನೀವು ಈಗಾಗಲೇ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಅರ್ಜಿಯ ಸ್ಟೇಟಸ್‌ ಅನ್ನು ಚೆಕ್‌ ಮಾಡುತ್ತಿರಬೇಕು. ನಿಮ್ಮ ಅರ್ಜಿಯ ಸ್ಟೇಟಸ್ ಮತ್ತು ಮುಂದೆ ಏನು ಮಾಡಬೇಕೆಂದು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ತಿಳಿಸಲಾಗುತ್ತದೆ.

WhatsApp Group Join Now
Telegram Group Join Now       

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಸರ್ಕಾರಿ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ, ಆಯ್ಕೆಯಾದ ಇಂಟರ್ನ್‌ಗಳು ಭಾರತದ ಅಗ್ರ 500 ಕಂಪನಿಗಳಲ್ಲಿ ಉದ್ಯೋಗ ಪಡೆಯಲಿದ್ದಾರೆ.

 

ಇದನ್ನು ಓದಿರಿ.

 

ತಿಂಗಳಿಗೆ ₹5 ಸಾವಿರ ಸ್ಟೈಪೆಂಡ್‌ :

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಕಾರ್ಯಕ್ರಮವು 12 ತಿಂಗಳವರೆಗೆ ಇರುತ್ತದೆ. ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಪ್ರತಿಯೊಬ್ಬ ತರಬೇತಿದಾರರಿಗೆ ತಿಂಗಳಿಗೆ ₹5,000 ಸ್ಟೈಪೆಂಡ್‌ ನೀಡಲಾಗುತ್ತದೆ. ತರಬೇತಿ ನೀಡುವ ಕಂಪನಿಯು ಆರಂಭದಲ್ಲಿ ಮಾಸಿಕ ಸ್ಟೈಪೆಂಡ್‌ ಆಗಿ ಪ್ರತಿ ತಿಂಗಳು 500ರೂ. ಠೇವಣಿ ಇಡುತ್ತದೆ. ಇದಾದ ನಂತರ ಕೇಂದ್ರ ಸರ್ಕಾರವು ಫಲಾನುಭವಿಗಳ ಆಧಾರ್-ಲಿಂಕ್ಡ್ ಬ್ಯಾಂಕ್ ಖಾತೆಯಲ್ಲಿ ಮಾಸಿಕ ₹4500 ಜಮೆ ಮಾಡುತ್ತದೆ. ತಮ್ಮ ಹೆಸರನ್ನು ನೋಂದಾಯಿಸಿದ ನಂತರ ಕೇಂದ್ರವು ಅವರಿಗೆ ಒಂದು ಬಾರಿ ₹6,000 ರೂ. ಪಾವತಿ ಮಾಡುತ್ತದೆ. ಅಂದರೆ, ಒಂದು ವರ್ಷದಲ್ಲಿ ಒಟ್ಟು ₹66000 ಸಿಗಲಿದೆ.

 

WhatsApp Group Join Now
Telegram Group Join Now       

ಇಂಟರ್ನ್ಶಿಪ್ ಯೋಜನೆಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.

 

ಅರ್ಜಿ ಸಲ್ಲಿಕೆಗೆ ಅರ್ಹತೆಗಳು :

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಭಾರತೀಯ ಪ್ರಜೆಯಾಗಿರಬೇಕು. 21-24 ವರ್ಷ ವಯಸ್ಸಿನವರಾಗಿರಬೇಕು. ಪೂರ್ಣ ಸಮಯದ ಉದ್ಯೋಗಿಯಾಗಿರಬಾರದು ಅಥವಾ ಪೂರ್ಣ ಸಮಯದ ಶಿಕ್ಷಣದಲ್ಲಿರಬಾರದು. ಆದರೆ, ಆನ್‌ಲೈನ್ ಅಥವಾ ದೂರ ಶಿಕ್ಷಣವನ್ನು ಪಡೆಯುತ್ತಿರುವವರು ಅರ್ಜಿ ಸಲ್ಲಿಸಬಹುದು. ಅಲ್ಲದೆ, ನೀವು 10 ನೇ ತರಗತಿ (SSC) ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಪ್ರಮಾಣಪತ್ರವನ್ನು ಹೊಂದಿರಬೇಕು. ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ ಮತ್ತು ಬಿಫಾರ್ಮಾ ಮುಂತಾದ ಪದವಿಗಳನ್ನು ಹೊಂದಿರುವವರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.

PM internship scheme 2025

PMISನ ಪ್ರಯೋಜನಗಳು :

ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹5000 ಸ್ಟೈಪೆಂಡ್‌ ನೀಡಲಾಗುತ್ತದೆ. ಅಂದರೆ ವರ್ಷಕ್ಕೆ ₹60 ಸಾವಿರ ರೂಪಾಯಿ ಸಿಗುತ್ತದೆ. ಇದು ಆರ್ಥಿಕ ನೆರವಿನ ಅಡಿಯಲ್ಲಿ ಬರುತ್ತದೆ. ಅಲ್ಲದೆ, ಕಂಪನಿಗೆ ಸೇರುವ ಮೊದಲು, ಒಂದು ಬಾರಿಯ ಅನುದಾನ ₹6 ಸಾವಿರ ನೀಡಲಾಗುವುದು. ವರ್ಷದಲ್ಲಿ ಒಟ್ಟು ₹66 ಸಾವಿರ ಬರುತ್ತದೆ. ನಿಮ್ಮ ಅರ್ಧದಷ್ಟು ಸಮಯವನ್ನು ನೀವು ಕೆಲಸದ ವಾತಾವರಣದಲ್ಲಿ ಕಳೆಯಬೇಕಾಗುತ್ತದೆ. ಅದೇ ಸಮಯದಲ್ಲಿ, ಇಂಟರ್ನ್‌ಗಳಿಗೆ ವೈಯಕ್ತಿಕ ವಿಮಾ ಸೌಲಭ್ಯವೂ ಇರುತ್ತದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಂತಹ ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ವಿಮೆ ಲಭ್ಯವಿದೆ. ಪ್ರೀಮಿಯಂ ಅನ್ನು ಸರ್ಕಾರವೇ ಪಾವತಿಸುತ್ತದೆ.

ನೀವು PMIS ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಆಧಾರ್ ಆಧಾರಿತ ಮುಖ ದೃಢೀಕರಣದೊಂದಿಗೆ ನೋಂದಾಯಿಸಿಕೊಳ್ಳಬೇಕು. ಲಭ್ಯವಿರುವ ಇಂಟರ್ನ್‌ಶಿಪ್‌ಗಳನ್ನು ಪರಿಶೀಲಿಸಿ. ನೀವು ಅಪ್ಲಿಕೇಶನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ನೀವು ಅಲ್ಲಿ ಎಲ್ಲವನ್ನೂ ರಿಯಲ್‌ಟೈಂ ಅಪ್ಡೇಟ್‌ ಪಡೆಯಬಹುದು. ಬಳಕೆದಾರರಿಗೆ ಸಹಾಯ ಮಾಡಲು ಇಲ್ಲಿ ಒಂದು ತಂಡವೇ ಇರುತ್ತದೆ. ಅವರು ಅಲ್ಲಿ ಎಲ್ಲ ವಿವರಗಳನ್ನು ಒದಗಿಸುತ್ತಾರೆ

 

ವಾಟ್ಸಾಪ್ ಗ್ರೂಪ್ ಲಿಂಕ್ ಇಲ್ಲಿದೆ.

 

1 thought on “PM internship scheme 2025 : ಯುವಕರಿಗೆ ಸರ್ಕಾರದಿಂದ ತಿಂಗಳಿಗೆ ₹5000, ಈ ರೀತಿ ಅರ್ಜಿ ಹಾಕಿರಿ !”

Leave a Comment

?>