Novodaya school aplication : ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಆರಂಭ, ಹೀಗೆ ಅರ್ಜಿ ಹಾಕಿ !
ನವೋದಯ ವಿದ್ಯಾಲಯ ಸಮಿತಿ ವತಿಯಿಂದ 2026-27 ನೇ ಶೈಕ್ಷಣಿಕ ವರ್ಷಕ್ಕೆ ನವೋದಯ ಶಾಲೆಯಲ್ಲಿ(Navodaya School) 6 ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದರ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ಗುಣಮಟ್ಟದ ಶಿಕ್ಷಣಕ್ಕೆ ದೇಶದಲ್ಲಿ ಹೆಸರುವಾಸಿಯಾದ ಜವಾಹರ್ ನವೋದಯ(Navodaya Vidyalaya) ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬಹುದು. ಈ ಶಾಲೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣಕ್ಕೆ ಅವಶ್ಯವಿರುವ ಎಲ್ಲಾ ಅವಶ್ಯಕ ಕಲಿಕೆಯನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.
ಈ ಅಂಕಣದಲ್ಲಿ ನವೋದಯ ಶಾಲೆಯಲ್ಲಿ(Navodaya School Application) ಪ್ರವೇಶ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಮುಖ ದಿನಾಂಕದ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಜವಾಹರ್ ನವೋದಯ ವಿದ್ಯಾಲಯಗಳ ವಿವರ :
1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ, ಭಾರತ ಸರ್ಕಾರವು ಜವಾಹರ್ ನವೋದಯ ವಿದ್ಯಾಲಯಗಳನ್ನು (JNV) ಪ್ರಾರಂಭಿಸಿತು. ಪ್ರಸ್ತುತ, 27 ರಾಜ್ಯಗಳು ಮತ್ತು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜವಾಹರ್ ನವೋದಯ ವಿದ್ಯಾಲಯಗಳು(JNV) ವ್ಯಾಪಿಸಿವೆ. ಇವು ಸಹ-ಶಿಕ್ಷಣ ಆವಾಸಿಕ ಶಾಲೆಗಳಾಗಿದ್ದು, ಭಾರತ ಸರ್ಕಾರದಿಂದ ಪೂರ್ಣವಾಗಿ ಹಣಕಾಸು ಮತ್ತು ಆಡಳಿತವನ್ನು ನವೋದಯ ವಿದ್ಯಾಲಯ ಸಮಿತಿ ಎಂಬ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ.
ನವೋದಯ ಶಾಲೆಗಳಲ್ಲಿ(JNV) 6 ನೇ ತರಗತಿಗೆ ಪ್ರವೇಶವು ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ಮೂಲಕ ನಡೆಯುತ್ತದೆ. 8ನೇ ತರಗತಿಯವರೆಗೆ ಬೋಧನಾ ಮಾಧ್ಯಮವು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಾಗಿದ್ದು, JNV ವಿದ್ಯಾರ್ಥಿಗಳು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (CBSE) ಬೋರ್ಡ್ ಶಿಕ್ಷಣ ವ್ಯವಸ್ಥೆಯನ್ನು ಹೊಂದಿವೆ.
SSLC ಪರೀಕ್ಷೆ 2 ರ ರಿಸಲ್ಟ್ ಲಿಂಕ್
ನವೋದಯ ಶಾಲೆಗಳಲ್ಲಿನ ಸೌಲಭ್ಯಗಳು:
ಪ್ರವೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನವೋದಯ ಶಾಲೆಗಳಲ್ಲಿ ನೀಡಲಾಗುತ್ತದೆ.
ಶಾಲೆಗಳಲ್ಲಿ ಶಿಕ್ಷಣ, ವಸತಿ, ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ಉಚಿತವಾಗಿದ್ದು, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಂದ ಮಾತ್ರ ವಿದ್ಯಾಲಯ ವಿಕಾಸ ನಿಧಿಗೆ ತಿಂಗಳಿಗೆ 600 ರೂ. ಸಂಗ್ರಹಿಸಲಾಗುತ್ತದೆ. SC/ST ವರ್ಗ, ದಿವ್ಯಾಂಗ ವಿದ್ಯಾರ್ಥಿಗಳು, ಎಲ್ಲಾ ಬಾಲಕಿಯರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ(BPL Card) ವಿದ್ಯಾರ್ಥಿಗಳು ಈ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.
ಗುಣಮಟ್ಟದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಇತರೆ ಕೌಶಲ್ಯ ಕಲಿಕೆಗೂ ಸಹ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವಿರುತ್ತದೆ.
ನವೋದಯ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತೇಕ ಹಾಸ್ಟೆಲ್ ಲಭ್ಯವಿರುತ್ತದೆ.
ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅರ್ಹ ವಿದ್ಯಾರ್ಥಿಗಳು:
ಅರ್ಜಿದಾರ ವಿದ್ಯಾರ್ಥಿಯು ಪ್ರಸ್ತುತ ವರ್ಷದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿರಬೇಕು.
ವಿದ್ಯಾರ್ಥಿಯು 01 ಮೇ 2014 ರಿಂದ 30 ಏಪ್ರಿಲ್ 2016 ರ ಮಧ್ಯೆ ಹುಟ್ಟಿದವರಾಗಿರಬೇಕು.
ನವೋದಯ ಶಾಲೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 27 ಜುಲೈ 2025
ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ- 13 ಡಿಸೆಂಬರ್ 2025
ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ- ಮಾರ್ಚ 2026 ಅಂತ್ಯದಲ್ಲಿ
ನವೋದಯ ಶಾಲೆ ಅರ್ಜಿ ಸಲ್ಲಿಸುವ ವಿಧಾನ :
ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ನವೋದಯ ವಿದ್ಯಾಲಯದ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಪ್ರಥಮದಲ್ಲಿ ಇಲ್ಲಿ ಕ್ಲಿಕ್ Navodaya Online Application ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಹಂತ 2 : ಇದಾದ ಬಳಿಕ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ನವೋದಯ ಶಾಲೆಗೆ ಅರ್ಜಿ ಸಲ್ಲಿಸುವ ದಾಖಲೆಗಳು :
- ವಿದ್ಯಾರ್ಥಿಯ ಪೋಟೋ/Student Photo
- ಆಧಾರ್ ಕಾರ್ಡ/Aadhar
- ವಿದ್ಯಾರ್ಥಿಯ ಸಿಹಿ ಪ್ರತಿ/Signature
- ಪೋಷಕರ ಸಹಿ ಪ್ರತಿ/Parent Signature
- ನಿವಾಸಿ ದೃಡೀಕರಣ ಪ್ರಮಾಣ ಪತ್ರ/Residential certificate
- ವ್ಯಾಸಂಗ ಪ್ರಮಾಣ ಪತ್ರ/Study certificate
ಪರೀಕ್ಷೆ ಯಾವ ಭಾಷೆಯಲ್ಲಿ ಇದೆ :
ರಾಜ್ಯದಲ್ಲಿ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮಾರಾಠಿ ಇತರೆ 3 ಭಾಷೆಯಲ್ಲಿ ಪರೀಕೆ ಬರೆಯಲು ಅವಕಾಶವಿರುತ್ತದೆ.